ಸಾಗರ : ತಾಲೂಕಿನ ಆನಂದಪುರ ಸಮೀಪದ ಬೈರಾಪುರದ ಪೀರನ ಕಣಿವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
ಸಾಗರದಿಂದ ಆನಂದಪುರ ಮಾರ್ಗವಾಗಿ ಹಿರೇಕೆರೂರ ಹೋಗುವಾಗ ಈ ಘಟನೆ ನಡೆದಿದೆ. ಹಿರೇಕೆರೂರು ತಾಲೂಕಿನ ಹೊಲಂಬಿ ಕೊಂಡ ನಿವಾಸಿಗಳಾದ ಮಂಜು, ಶ್ವೇತಾ, ರುದ್ರೇಶ್ ಎಂಬುವರಿಗೆ ಗಾಯವಾಗಿದೆ.
ಮಗಳನ್ನು ನವೋದಯ ಶಾಲೆಗೆ ಸೇರಿಸುವ ಉದ್ದೇಶದಿಂದ ಸಾಗರಕ್ಕೆ ತೆರಳಿದ್ದರು. ಮರಳಿ ಊರಿಗೆ ಹೋಗುವಾಗ ಚಾಲಕ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಮಾನವೀಯತೆ ಮೆರೆದ ಪಿಎಸ್ಐ ಪ್ರವೀಣ್
ಅಪಘಾತದ ವಿಷಯ ತಿಳಿಯುತ್ತಿದಂತೆ ಆನಂದಪುರದ ಪಿಎಸ್ಐ ಪ್ರವೀಣ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರ್ಯಾಯ ವಾಹನ ಸಿಗದೇ ಇದ್ದ ಸಂದರ್ಭದಲ್ಲಿ ತಮ್ಮ ಪೊಲೀಸ್ ವಾಹನದಲ್ಲೇ ಕರೆದುಕೊಂಡು ಬಂದು ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಅಪಘಾತದಲ್ಲಿ ಗಾಯಕೊಂಡ ಗಾಯಗಳನ್ನು ಸಾಗಿಸುವಲ್ಲಿ ಪೊಲೀಸ್ ಸಿಬ್ಬಂದಿಗಳಾದ ನಿರಂಜನ್, ಸತೀಶ್ ಸಾತ್ ನೀಡಿದ್ದಾರೆ.