“ಶಿವಶರಣರ ನಾಡಿನ ಜೀವನಾಡಿ ಅಂಬ್ಲಿಗೋಳ – ಅಂಜನಾಪುರ ಜಲಾಶಯ ಭರ್ತಿ – ಅನ್ನದಾತನ ಮೊಗದಲ್ಲಿ ಮೂಡಿದ ಮಂದಹಾಸ”
ಸಾಗರ : ಶಿಕಾರಿಪುರ ತಾಲ್ಲೂಕಿನ ರೈತರ ಜೀವನಾಡಿ ತನ್ನ ಜೀವಕಳೆ ಮರಳಿ ಪಡೆದುಕೊಂಡು ಮೈದುಂಬಿ ಹರಿಯುತ್ತಿರುವ ಅಂಬ್ಲಿಗೋಳ ಹಾಗೂ ಅಂಜನಾಪುರ ಜಲಾಶಯಕ್ಕೆ ಇಂದು ಕುಟುಂಬ ಸಮೇತರಾಗಿ ಭೇಟಿ ಕೊಟ್ಟು ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರು, ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ರವರು ಜೊತೆಗೂಡಿ ಬಾಗಿನ ಸಮರ್ಪಣೆ ಮಾಡಿದರು.
ಜಲಾಶಯ ನೈಜ ಸೊಬಗನ್ನು ಮರಳಿ ಪಡೆದುಕೊಂಡಿದೆ – ಸಂಸದ ಬಿ ವೈ ರಾಘವೇಂದ್ರ
ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಧುಮ್ಮಿಕ್ಕಿದ ಪರಿಣಾಮ ಜಲಾಶಯ ತನ್ನ ನೈಜ ಸೊಬಗನ್ನು ಮರಳಿ ಪಡೆದುಕೊಂಡು ಉಳುವ ಯೋಗಿಯ ಮೊಗದಲ್ಲಿ ಭಯದ ಕಾರ್ಮೋಡ ದೂರವಾಗಿ ಭರವಸೆಯ ಮಂದಹಾಸ ಮೂಡಿಸಿದ್ದು, ಈ ಸಾಲಿನಲ್ಲಿ ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಮೂಡಿದೆ.
ಬಿಎಸ್ ಯಡಿಯೂರಪ್ಪ ಅವರ ಕರ್ಮ ಭೂಮಿ ಸದಾ ಜಲ ಸಮೃದ್ಧಿ ಹಾಗೂ ಸಸ್ಯ ಸಮೃದ್ಧಿಯಿಂದ ಕಂಗೊಳಿಸುತ್ತಿರುತ್ತದೆ -ಬಿ ವೈ ವಿಜಯೇಂದ್ರ
ಸದಾ ರೈತರ ಬಗ್ಗೆ ನಾಡಿನ ಜಲ, ಸಸ್ಯ, ಧಾನ್ಯ ಸಮೃದ್ಧಿ ಗಳ ಬಗ್ಗೆ ಚಿಂತನೆ ಮಾಡುವ ಪೂಜ್ಯ ತಂದೆಯವರಾದ ಮಾನ್ಯ ಬಿಎಸ್ ಯಡಿಯೂರಪ್ಪ ಅವರ ಕರ್ಮ ಭೂಮಿ ಸದಾ ಜಲ ಸಮೃದ್ಧಿ ಹಾಗೂ ಸಸ್ಯ ಸಮೃದ್ಧಿಯಿಂದ ಕಂಗೊಳಿಸುತ್ತಿರುತ್ತದೆ ಎಂಬುವುದು ನಮ್ಮ ಶಿಕಾರಿಪುರದ ಹೆಮ್ಮೆ. ಭೂತಾಯಿ ಹಾಗೂ ವರುಣನ ಕೃಪೆಯಿಂದ ಕನ್ನಡ ನಾಡು ಸದಾ ಸಮೃದ್ಧಿ ಕೊಡಲಿ ಎಂದು ಆಶಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಅವರು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ ಅವರು ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.