ಸಾಗರ : ಕರೂರು ಬಾರಂಗಿ ಹೋಬಳಿಯ ಜನರ ಬಹು ನಿರೀಕ್ಷಿತ ಅಂಬಾರಗೋಡ್ಲು – ಕಲಸವಳ್ಳಿ ಸೇತುವೆ ನಿರ್ಮಾಣವಾಗಿ ಜನರ ಸಂಚಾರಕ್ಕೆ ಜುಲೈ 14ರಂದು ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯವಾಗಿದೆ.
ನೂತನ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ- ಸ್ವಾಗತಿಸಿದ ರತ್ನಾಕರ್ ಹೊನಗೋಡು
ಅಂಬಾರಗೋಡ್ಲು – ಕಳಸವಳ್ಳಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಸಂಸದ ಬಿ. ವೈ ರಾಘವೇಂದ್ರ ನಾಮಕರಣ ಮಾಡಲು ಸೂಚನೆ ನೀಡಿರುವುದು ಸಂತಸದ ವಿಷಯ ಹಾಗೂ ಸ್ವಾಗತ ಮಾಡುತ್ತೇವೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೇಳಿದರು.
ಶಾಸಕರು ಬ್ಲಾಕ್ ಮೇಲ್ ತಂತ್ರ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಲಿ
ಸಾಗರದ ಶಾಸಕರು ಬ್ಲಾಕ್ಮೇಲ್ ತಂತ್ರವನ್ನು ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಇವರಿಂದಾಗಿ ಸಾಗರದ ಕ್ಷೇತ್ರ ಅಭಿವೃದ್ಧಿಯಲ್ಲಿ 10 ವರ್ಷ ಹಿಂದೆ ಹೋಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬದಿಂದ ಶಾಸಕರಾದ ಇವರು ಆ ಕುಟುಂಬದ ವಿರುದ್ಧವೇ ಇಲ್ಲಸಲ್ಲದ ಮಾತನಾಡುವುದು ಸರಿಯಲ್ಲ. ಸಿಗಂದೂರು ಸೇತುವೆ ಯಡಿಯೂರಪ್ಪನವರ ಬದ್ಧತೆ ಸಂಸದ ರಾಘವೇಂದ್ರ ಅವರ ಶ್ರಮದ ಫಲದಿಂದಾಗಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಾಸಕರು ಅರಿತುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅನಂದಪುರ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಪ್ಪ ಗೌಡ, ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಜಾನಪದ ಕಲಾವಿದ ಮಂಜಪ್ಪ ಇದ್ದರು.