ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಅಂಬಾರಗೊಡ್ಲು – ಕಳಸವಳ್ಳಿ ಸೇತುವೆಗೆ ಬಿಎಸ್ ಯಡಿಯೂರಪ್ಪನವರ ಹೆಸರಿಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯ The all India Veerashaiva lingayath mahasabha unit has demanded that the ambaragodlu-kalasavalli bridge be named former chief minister B S Yadiyurappa

On: July 11, 2025 1:29 PM
Follow Us:
---Advertisement---

ಸಾಗರ : ಅಂಬಾರಗೋಡ್ಲು – ಕಳಸವಳ್ಳಿ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಘಟಕ ಒತ್ತಾಯ ಮಾಡಿದೆ. mahasabha

ಅಂಬಾರಗೋಡ್ಲು – ಕಳಸವಳ್ಳಿ ಸೇತುವೆಗೆ ಬಿಎಸ್ ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಉಮೇಶ್ ಮಸರೂರು ಅವರು ಒತ್ತಾಯಿಸಿದ್ದಾರೆ.siganduru bridge 2

ಮಾಜಿ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪನವರು ಕರ್ನಾಟಕ ರಾಜ್ಯಕ್ಕೆ.. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೆ ಅಭಿವೃದ್ಧಿಯ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಜಿಲ್ಲೆಯಲ್ಲಿ ಅನೇಕ ವಿಶ್ವ ಭೂಪಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಇವರು ಒಂದು ವರ್ಗಕ್ಕೆ ಸೀಮಿತವಾಗಿ ರಾಜಕಾರಣ ಮಾಡದೆ,  ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ವರ್ಗಕ್ಕೂ ಸಮಾನತೆಯ ಪಾಲು ನೀಡಿದ್ದಾರೆ. ಇವರ ಪರಿಶ್ರಮದಿಂದ ನಿರ್ಮಾಣವಾದ ಅಂಬಾರಗೋಡ್ಲು – ಕಳಸವಳ್ಳಿ ಸಿಗಂದೂರು ಸೇತುವೆಗೆ ಬಿಎಸ್ ಯಡಿಯೂರಪ್ಪನವರ ಹೆಸರಿಡಬೇಕು. ಹೊಸನಗರ 2

ಈ ಸೇತುವೆ ನಿರ್ಮಾಣವಾಗಲು ಇವರ ಪರಿಶ್ರಮ ಇವರ ತುಂಬಾನೇ ಇದ್ದು, ಇವರಿಂದಲೇ ಈ ಸೇತುವೆಯಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಈ ಸೇತುವೆಗೆ ಬಿ.ಎಸ್ ಯಡಿಯೂರಪ್ಪನವರ ಹೆಸರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.20250703 190851 1

ಯಡಿಯೂರಪ್ಪನವರು ಎಲ್ಲಾ ವರ್ಗದವರು ಒಪ್ಪುವಂತಹ ಪ್ರಶ್ನಾತೀತ ನಾಯಕರಾಗಿದ್ದು ಜಿಲ್ಲೆಗೆ ಇವರ ಕೊಡುಗೆ ಅಪಾರ ಇದನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

Join WhatsApp

Join Now

Join Telegram

Join Now

Leave a Comment