ಸಾಗರ : ತಾಲ್ಲೂಕಿನ ಹೊಸೂರು ಸಮೀಪದ ನಂದಿಹೂಳೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ವಾಹನಗಳ ನಡುವೆ ಭೀಕರ ಅಪಘಾತವಾಗಿದೆ.
ಶಿವಮೊಗ್ಗದಿಂದ ಸಾಗರದ ಕಡೆ ಹೋಗುವ ಅಶೋಕ ಲೈಲ್ಯಾಂಡ್ ಹಾಗೂ ಸಾಗರದಿಂದ ಹೊಸೂರಿಗೆ ಬರುತ್ತಿದ್ದ ಕಾರು ನಡುವೆ ನಂದಿಹೂಳೆ ಸಮೀಪ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮಾಲೀಕ ಹೊಸೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.