ಶಿವಮೊಗ್ಗ : ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಹಿಂಬದಿಯಲ್ಲಿ ಬರೋಬ್ಬರಿ 6 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲ ಕಾಲ ಮನೆಯವರ ಆತಂಕಕ್ಕೂ ಕಾರಣವಾಗಿತ್ತು. ನಂತರ ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಹಾವು ಕೆಲ ಸಮಯ ಕಳೆದರೂ ಹೊರಗೆ ಬರದೆ ಇದ್ದ ಸಂದರ್ಭದಲ್ಲಿ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಸ್ನೇಕ್ ಕಿರಣ್ ಸ್ಥಳಕ್ಕೆ ಬಂದು ಕಷ್ಟಪಟ್ಟು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ವೇತ ಬಂಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಮಹೇಂದ್ರ ಕಾರಿನ ಹಿಂಭಾಗದ ಬಂಪರ್ ನಲ್ಲಿ ಸೇರಿಕೊಂಡಿದೆ.
ಕಾರಿನ ಹಿಂಬದಿಯ ಬಂಪರ್ ತೆಗೆದು ನೋಡಿದಾಗ ಹೆಬ್ಬಾವು ಕಾರಿನ ಒಳಗೆ ನುಸುಳುತ್ತಿತ್ತು. ತಕ್ಷಣ ಅದನ್ನು ಹಿಡಿದು ಹೊರಗೆ ತಂದಿದ್ದಾರೆ. ಹೊರಗೆ ಬಂದ ಹಾವು ಸ್ನೇಕ್ ಕಿರಣ್ ಅವರ ಮೇಲೆಯೇ ಎರಗಿದೆ. ಈ ವೇಳೆ ಸ್ನೇಕ್ ಕಿರಣ್ ತಮ್ಮ ಚಾಕಚಕ್ಯತೆಯಿಂದ ಹಾವು ಬೇರೆ ಕಡೆ ಹೋಗುವುದನ್ನು ತಡೆದು ಸುರಕ್ಷಿತವಾಗಿ ತಾವು ತಂದಿದ್ದ ಚೀಲದೊಳಗೆ ಹೆಬ್ಬಾವು ನ್ನು ಹಿಡಿದು ಅರಣ್ಯ ಇಲಾಖೆ ಅವರ ಸಮ್ಮುಖದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇