ಸಾಗರ : ತಾಲ್ಲೂಕಿನ ತ್ಯಾಗರ್ತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಾಗೋಡು ತಿಮ್ಮಪ್ಪ ವೃತ್ತದ ಯುವಜನ ಬಳಗದ ವತಿಯಿಂದ ಒಂದರಿಂದ ಆರು ವರ್ಷಗಳ ಒಳಗಿನ ಮಕ್ಕಳಿಗೆ ರಾಧಾ ಕೃಷ್ಣ ವೇಷದ ಪ್ರದರ್ಶನ ಏರ್ಪಡಿಸಲಾಗಿತ್ತು.
ತಾಯಂದಿರು ಮಕ್ಕಳಿಗೆ ವಿವಿಧ ರೀತಿಯ ರಾದೆ ಹಾಗೂ ಕೃಷ್ಣನ ವೇಷ ತೊಡಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಕ್ಕಳು ರಾಧಾ ಕೃಷ್ಣ ವೇಷ ಪ್ರದರ್ಶನ ಆಕರ್ಷಿಣಿಯವಾಗಿತ್ತು.
ಉಡುಪಿ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೊಳಿಯಪ್ಪ ಹುತ್ತಾದಿಂಬ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಯುವಜನ ಬಳಗದ ಅಧ್ಯಕ್ಷ ಇಸಾಕ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಉಪನ್ಯಾಸಕ ವಸಂತ್ ಹೊನ್ನಾಳಿ, ಪಿಎಸಿಎಸ್ ಅಧ್ಯಕ್ಷ ಟಿ ಕೆ ಹನುಮಂತಪ್ಪ, ಪ್ರಮುಖರಾದ ಅಮೃತ್ ರಾಜ್, ಜೈ ಕುಮಾರ್ ಕಳ್ಳಿಮಟ್ಟಿ ಪ್ರದೀಪ, ನಾಗರಾಜ್,ಗುತ್ಯಪ್ಪ, ಶಿಕ್ಷಕರಾದ ಸರ್ವೇಶ್, ಕಾಂತಿ, ದಿಲೀಪ್ ಇನ್ನಿತರರು ಉಪ್ಥಿತರಿದ್ದರು.