ಸಾಗರ : ತಾಲೂಕಿನ ಸಮೀಪದ ಬಲೆಗಾರು ಬಳಿ ಓಮಿನಿ ಮತ್ತು ಬುಲೆರೋ ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದಿಂದ ಓಮಿನಿಯಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದು, ಎನ್ ಆರ್ ಪುರದ ಶೇಖರಪ್ಪ ಎಂಬುದಾಗಿ ತಿಳಿದು ಬಂದಿದೆ. ಮಗು ಸೇರಿದಂತೆ 6 ಜನರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ.
ಎನ್ ಆರ್ ಪುರದಿಂದ ಓಮಿನಿಯಲ್ಲಿ ಜೋಗ ಜಲಪಾತದ ವೀಕ್ಷಣೆಗೆ ಹೋಗುವಾಗ ಜೋಗದ ಕಡೆಯಿಂದ ಬಂದ ಪಿಕಪ್ ವಾಹನಗಳ ನಡುವೆ ಬಲೆಗಾರು ಸಮೀಪ ಮುಖಾಮುಖಿ ಅಪಘಾತ ಸಂಭವಿಸಿದೆ.
ಎಲ್ಲ ಗಾಯಾಳುಗಳಿಗೆ ಸಾಗರದ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.