ಸಾಗರ : ದೇಶಕ್ಕೆ ಸ್ವಾತಂತ್ರ ಬಂದು 79ನೇ ಸಂಭ್ರಮಾಚರಣೆಯಲ್ಲಿರುವ ಸಂದರ್ಭದಲ್ಲಿ ಸಾಗರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಇನ್ನೂ ಸ್ವಾತಂತ್ರ್ಯ ಎನ್ನುವುದು ಕನಸಾಗಿಯೇ ಉಳಿದಿದೆ ಎಂದು ಶಿವಮೊಗ್ಗ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭದ್ರೇಶ ಆಕ್ರೋಶ ವ್ಯಕ್ತಪಡಿಸಿದರು.
ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮದ ಮೂಲಭೂತ ಸೌಕರ್ಯಕ್ಕಾಗಿ ಸಾಗರದ ನಗರಸಭೆ ಮುಂದೆ ಹೋರಾಟ ಮಾಡುವಾಗ ಬಂಧನ ಮಾಡಿ, ಆನಂದಪುರದ ಪೊಲೀಸ್ ಠಾಣೆಯಲ್ಲಿ ತಂದು ಇರಿಸಿ ಬಿಡುಗಡೆಗೊಳಿಸಿದ ನಂತರ ಮಾತನಾಡಿದರು.
ನಾಡಿಗೆ ವಿದ್ಯುತ್ ನೀಡಿದ ಗ್ರಾಮ ಇಂದು ಸ್ವಾತಂತ್ರ್ಯ ಸಿಗದೇ ಕತ್ತಲಲ್ಲಿ ಇದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು ಹಾಗೂ ಶಾಲೆಯ ಸೌಲಭ್ಯಗಳಿಲ್ಲದೆ ಸ್ವಾತಂತ್ರ್ಯ ಸಿಗದಂತಹ ಗ್ರಾಮಗಳಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷದ ಸಂಭ್ರಮಾಚರಣೆಯಲ್ಲಿರುವ ನಮಗೆ ತುರ್ತು ಚಿಕಿತ್ಸೆಗಾಗಿ ಜೋಳಿಗೆಯಲ್ಲಿ ರೋಗಿಗಳನ್ನು ಕರೆದುಕೊಂಡು ಪರಿಸ್ಥಿತಿ ಮನಕಲಕುವಂತಿದೆ ಎಂದು ಹೇಳಿದರು.
ಹಲವು ಬಾರಿ ಈ ಬಗ್ಗೆ ಧರಣಿ, ಸತ್ಯಾಗ್ರಹಗಳು, ಮನವಿಗಳನ್ನು ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರು ಅಧಿಕಾರಿಗಳು ಯಾವುದೇ ರೀತಿಯ ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುಗ್ರಾಮಗಳಿಗೆ ಮೂಲಭೂತ ಸ ಸೌಕರ್ಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಡಿಸಿ ಕಚೇರಿಯವರೆಗೂ ಪಾದಯಾತ್ರೆ ನಡೆಸಲು ಚಿಂತನೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಶಾಸಕರು, ಉಸ್ತುವರಿ ಸಚಿವರು ಇತ್ತ ಗಮನ ಹರಿಸಲಿ
ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿಲ್ಲೆಯ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ನಮ್ಮ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕೆಂದು ಆಗ್ರಹಿಸಿದರು.
ಮೂಲಭೂತ ಸೌಕರ್ಯ ನೀಡಲು ಸರ್ಕಾರ ಸಿದ್ಧವಿದೆ – ಶಾಸಕ ಗೋಪಾಲಕೃಷ್ಣ ಬೇಳೂರು
ಉರುಳುಗಲ್ಲು ಸೇರಿದಂತೆ ಕೆಲ ಗ್ರಾಮಗಳ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಗ್ರಾಮದ ಅಭಿವೃದ್ಧಿಗೆ 5.5೦ ಕೋಟಿ ನೀಡಲು ಸಿದ್ಧವಿದೆ. ಆದರೆ ಅರಣ್ಯ ಇಲಾಖೆಯ ಅನುಮತಿ ಪತ್ರ ಸಿಗದೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಕ್ಲಿಯರೆನ್ಸ್ ಗಾಗಿ ದೆಹಲಿಗೆ ಕಳಿಸಲಾಗಿದೆ. ಅದು ಬಂದ ನಂತರ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇