ಶಿವಮೊಗ್ಗ : ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ – 52 ಬಾಳೆಬರೆ ಘಾಟ್ ( ಹುಲಿಕಲ್ ಘಾಟ್) ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ ಸರಪಳಿ 42 -10 ರಿಂದ 42-20 ರಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಪ್ರಸ್ತುತ ಮಣ್ಣು ಕುಸಿತವಾಗಿರುವ ಭಾಗದಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಂಡಿರುವುದಾಗಿ, ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಮತ್ತೆ ಕುಸಿಯುವ ಸಂಭವಿಸುವುದರಿಂದ ಸುರಕ್ಷತಾ ದೃಷ್ಟಿಯಿಂದ ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿ ಕಟ್ಟೆಯಿಂದ ಹೊಸಂಗಡಿಯವರಿಗೆ ತಾತ್ಕಾಲಿಕವಾಗಿ ಮಳೆಗಾಲದ ವರೆಗೆ ಬಾರಿ ವಾಹನಗಳ ಸಂಚಾರವನ್ನು ನಿಷೇಧ ಗೊಳಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಅಧಿಸೂಚನೆ ಹೊರಡಿಸಲು ಕಾರ್ಯಪಾಲಕ ಇಂಜಿನಿಯರ್ ಕೋರಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದ್ದಾರೆ.
ಪರ್ಯಾಯ ಮಾರ್ಗ ಈ ಕೆಳಕಂಡಂತೆ ಇದೆ.
- ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52 ರಸ್ತೆಯ ತೀರ್ಥಹಳ್ಳಿಯಿಂದ ಕುಂದಾಪುರದ ಕಡೆಗೆ ಹೋಗುವ ಬಾರಿ ವಾಹನಗಳು ( ತೀರ್ಥಹಳ್ಳಿ -ರಾವೆ ಕಾನುಗೋಡು ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ -ಸಿದ್ದಾಪುರ ಮೂಲಕ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 52)
ಬದಲಿ ಮಾರ್ಗ
ತೀರ್ಥಹಳ್ಳಿ -ರಾವೆ -ಕಾನಗೋಡು -ನಗರ ಕೊಲ್ಲೂರು- ಕುಂದಾಪುರ ರಸ್ತೆ.
2. ನಗರ ಸಿದ್ದಾಪುರ ರಾಜ್ಯ ಹೆದ್ದಾರಿ 278 ರಸ್ತೆ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು.(ತೀರ್ಥಳ್ಳಿ ಯಡೂರು ಸುಳಗೋಡು ಮಾಸ್ತಿಕಟ್ಟೆ ಹುಲಿಕಲ್ ಘಾಟ್ ಹೊಸಂಗಡಿ ಸಿದ್ದಾಪುರ ಮೂಲಕ ಕುಂದಾಪುರ ಸೇರವ ರಸ್ತೆ)
ಬದಲಿ ಮಾರ್ಗ
ತೀರ್ಥಹಳ್ಳಿ ಯಡೂರು ಮಾಸ್ತಿಕಟ್ಟೆ, ಕಾನುಗೋಡು ನಗರ ಕೊಲ್ಲೂರು ಕುಂದಾಪುರ ರಸ್ತೆ
3. ಶಿವಮೊಗ್ಗ /ಸಾಗರ ಕಡೆಯಿಂದ ಹೊಸನಗರ ಮೂಲಕ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು ( ಶಿವಮೊಗ್ಗ ಸಾಗರ ಕಡೆಯಿಂದ ಹೊಸನಗರ ನಗರ ಮಾಸ್ತಿಕಟ್ಟೆ ಹುಲಿಕಲ್ ಘಾಟ್ ಹೊಸಂಗಡಿ ಸಿದ್ದಾಪುರ ಮೂಲಕ ಕುಂದಾಪುರ ಸೇರುವ ರಸ್ತೆ)
ಬದಲಿ ಮಾರ್ಗ
ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಭಟ್ಕಳ ಬೈಂದೂರು ಕುಂದಾಪುರ ರಸ್ತೆಯ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.