ಸಾಗರ : ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಮಾಜಿ ಸಚಿವ ಹರತಾಳು ಹಾಲಪ್ಪ ತಾಲ್ಲೂಕು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.
ಆನಂದಪುರ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ರಾಷ್ಟ್ರೀಯ ಹೆದ್ದಾರಿ, ಕೃಷಿ ವಿಶ್ವವಿದ್ಯಾಲಯ ಒಳಗೊಂಡ ಜನಸಂದಣಿಯ ಕೇಂದ್ರವಾಗಿದೆ. ಇಂತಹ ಜನಸಂದಣಿಯ ಕೇಂದ್ರದಲ್ಲಿ ಅಪಘಾತಗಳು ಸಂಭವಿಸಿದರೆ 108 ಸೇವೆ ಸಿಗುವುದಿಲ್ಲ. ಗಾಯಾಳುಗಳನ್ನು ಪರ್ಯಾಯ ವಾಹನದ ಮೂಲಕ ಸಾಗಿಸುವಂತಾಗಿದೆ.
ವಾರದೊಳಗೆ ಆಂಬ್ಯುಲೆನ್ಸ್ ಸೇವೆ ನೀಡಿದಿದ್ದರೆ ಧರಣಿಯ ಎಚ್ಚರಿಕೆ
ಆಂಬ್ಯುಲೆನ್ಸ್ ಸೇವೆ ನೀಡುವ ಬಗ್ಗೆ ತಾಲ್ಲೂಕು ಆಡಳಿತ ಹಾಗೂ DHO ಗಮನವನ್ನು ತರುತ್ತೇನೆ. ಒಂದು ವಾರದೊಳಗೆ ಅಂಬುಲೆನ್ಸ್ ಸೇವೆ ನೀಡದಿದ್ದರೆ ಧರಣಿ ಕೂರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕಾಗಿದೆ. ಹಳೆ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದರೂ ಸಹ ಕೆಡುಗುವ ಕೆಲಸ ಆಗಿಲ್ಲ. ಶವಾಗಾರಕ್ಕೆ ಹೋಗಲು ಸೂಕ್ತವಾದ ರಸ್ತೆ ವ್ಯವಸ್ಥೆ ಇಲ್ಲ. ಇದರ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸಬೇಕು ಎಂದು ಹೇಳಿದರು. ಆಸ್ಪತ್ರೆಯಲ್ಲಿರುವ ಹಣವನ್ನು ಸರಿಯಾಗಿ ಬಳಸಿಕೊಂಡು ತುರ್ತು ಹಾಗೂ ಅಗತ್ಯತೆಗೆ ಬೆಳೆಸಿಕೊಳ್ಳಬೇಕು ಆಸ್ಪತ್ರೆಯ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಕಾಣೆಯಾದ ಜನರೇಟರ್ ಪತ್ತೆ ಮಾಡದಿದ್ದರೆ Dysp ಕಚೇರಿ ಎದುರು ಧರಣಿ
ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಣೆಯಾದ ಜನರೇಟರ್ ಪತ್ತೆ ಮಾಡದಿದ್ದರೆ Dysp ಕಚೇರಿ ಎದುರು ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕ್ರೈನ್ ಬಳಸಿ ಜನರೇಟರ್ ಕಳ್ಳತನ ಮಾಡಿದ್ದರೂ ತಾಲ್ಲೂಕು ಆಡಳಿತ ಮೌನವಾಗಿದೆ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ದೇವೇಂದ್ರಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ್ ಹೊನಗೋಡು, ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ, ಪ್ರಮುಖರಾದ ಭರ್ಮಪ್ಪ , ಕೊಟ್ರಪ್ಪ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇 👇