ಸಾಗರ : ತಾಲೂಕಿನ ಎಲ್ಲೆಡೆ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಾಗರ ಪಂಚಮಿ ಹಬ್ಬವನ್ನು ಭಕ್ತರು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ನಾಗರ ಪಂಚಮಿ ಹಬ್ಬದ ದಿನ ನಾಗರ ಬನ ನಾಗದೇವರ ವಿಗ್ರಹಗಳಿಗೆ ಹಾಲು ಹಣ್ಣು ಹೂಗಳನ್ನು ಅರ್ಪಿಸಲಾಗುತ್ತದೆ.
ಆನಂದಪುರದ ಕೆಇಬಿಯಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಬಂಧ ಗಟ್ಟಿಗೊಳಿಸುವ ನಾಗರಪಂಚಮಿ
ನಾಗರ ಪಂಚಮಿ ಹಬ್ಬವನ್ನು ಅಣ್ಣ ತಂಗಿಯರ, ಹೆಣ್ಣು ಮಕ್ಕಳ ಹಬ್ಬವೆಂದು ಸಹ ಕರೆಯಲಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಅತಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವು ಆಗಿದೆ. ನಾಗರ ಪಂಚಮಿ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವೆಂದೇ ಎಂದು ಹೇಳಬಹುದು. ನಾಗರ ಪಂಚಮಿಯನ್ನು ಆಚರಿಸುವ ಹೆಣ್ಣು ಮಕ್ಕಳಿಗೆ ಸಹೋದರ ರೂಪದಿಂದ ನಾಗರಕ್ಷಣೆ ಒದಗಿಸುತ್ತಾನೆ ಎಂಬ ಪ್ರತೀತಿ ಸಹ ಇದೆ.
ಆನಂದಪುರದ ಅರಳಿಕಟ್ಟೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು.
ಭಾರತೀಯ ಸಂಸ್ಕೃತಿಯ ವಿಶೇಷತೆ ಪ್ರತಿಬಿಂಬಿಸುವ ನಾಗರ ಪಂಚಮಿ
ಭಾರತೀಯ ಸಂಸ್ಕೃತಿಯ ವಿಶೇಷತೆ ಪ್ರತಿಬಿಂಬಿಸುವ ಅನೇಕ ಹಬ್ಬಗಳ ಪೈಕಿ ನಾಗರಪಂಚಮಿ ಒಂದು ವಿಶಿಷ್ಟವಾದ ಹಬ್ಬವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯ ಆಚರಣೆಗಳೊಂದಿಗೆ ಮಹತ್ವಪೂರ್ಣತೆ ಪಡೆದುಕೊಂಡಿದೆ.
ಗೇರುಬೀಸು ಗ್ರಾಮದಲ್ಲಿ ಸಡಗರದ ನಾಗರ ಪಂಚಮಿ
ಈ ಹಬ್ಬವು ಮಾನವ ಮತ್ತು ಪ್ರಕೃತಿ ನಡುವಿನ ನಿಕಟ ಸಂಬಂಧವನ್ನು ಸೂಚಿಸುತ್ತದೆ. ನಾಗರ ಪಂಚಮಿ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳ ಪರಸ್ಪರ ಸಂಬಂಧದ ಸ್ವರೂಪ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಮಹತ್ವವನ್ನು ಸಾರುವ ವಿಶೇಷ ಹಬ್ಬವಾಗಿದೆ.