ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಮನೆ ಮಂಜೂರಾತಿಗೆ ಹಣ ಪಡೆದಿಲ್ಲ ದೇವರ ಮುಂದೆ ಪ್ರಮಾಣ ಮಾಡುವೆ

On: July 3, 2025 4:13 PM
Follow Us:
---Advertisement---

ಸಾಗರ : ಸೊರಬದಲ್ಲಿ 12,000 ಮನೆಗಳನ್ನು ಬಡವರಿಗೆ ನೀಡಿದ್ದೇನೆ. ಒಂದು ರೂಪಾಯಿ ಹಣವನ್ನು ಸಹ ಪಡೆದಿಲ್ಲ. ದೇವರ ಮುಂದೆ ಈ ವಿಷಯವಾಗಿ ಪ್ರಮಾಣ ಮಾಡುವೆ ಎಂದು ಹೇಳಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ.

ಮನೆಗಳನ್ನು ಪಡೆಯಲು ವಸತಿ ಸಚಿವ ಸೋಮಣ್ಣ ಅವರಿಗಾಗಲಿ, ಮುಖ್ಯಮಂತ್ರಿ ಬಿ.ಎಸ್  ಯಡಿಯೂರಪ್ಪನವರಿಗಾಗಲಿ ಸಹ ಹಣವನ್ನು ನೀಡಿಲ್ಲ. ನಾನು ಸಹ ಬಡವರಿಂದ ಒಂದು ರೂಪಾಯಿ ಹಣವನ್ನು ಸಹ ಪಡೆದಿಲ್ಲ ಎಂದು ಹೇಳಿದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಮನೆಗಳನ್ನು ಪಡೆಯಲು ಹಣವನ್ನು ನೀಡಬೇಕು ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿರುವುದು ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹೇಳಿದರು.

ನಮ್ಮ ವಿರುದ್ಧ ಅಪಪ್ರಚಾರ

ಹರತಾಳು ಹಾಲಪ್ಪ ಅವರು ಕೇವಲ ಬ್ರಾಹ್ಮಣರು ಲಿಂಗಾಯಿತರಿಗೆ ಮಾತ್ರ ರಸ್ತೆಗಳ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು ಜಾತಿ ಧರ್ಮಗಳನ್ನು ನೋಡದೆ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇನೆ ಎಂದು ಹೇಳಿದರು.

2047ರ ಸಮಯದಲ್ಲಿ ಭಾರತ ವಿಶ್ವದ ನಾಯಕನಾಗಬೇಕು ಎಂಬ ಹಂಬಲವನ್ನು  ನರೇಂದ್ರ ಮೋದಿ ಅವರು ಹೊಂದಿದ್ದಾರೆ.  ಈ ನಿಟ್ಟಿನಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಅತಿ ವೇಗವಾಗಿ ಬೆಳೆಯುತ್ತಿದೆ.

 ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಗೆ  ಪಂಥಾಹ್ವಾನ ನೀಡಿದ ಟಿ.ಡಿ ಮೇಘರಾಜ್

ಸಾಗರ ಕ್ಷೇತ್ರದಲ್ಲಿ ಹರತಾಳ ಹಾಲಪ್ಪ ಹೆಚ್ಚು ಅನುದಾನ ತಂದಿದ್ದರೋ ಅಥವಾ ಶಾಸಕ ಗೋಪಾಲಕೃಷ್ಣ ಬೇಳೂರು ಹೆಚ್ಚು ಅನುದಾನ ತಂದಿದ್ದರೋ ಎಂಬುವುದನ್ನು ತಿಳಿಯಲು ಬಹಿರಂಗ ಚರ್ಚೆಗೆ ಕಾಂಗ್ರೆಸ್ ಗೆ ಅಹ್ವಾನ ನೀಡಿ  ಸವಾಲು ಹಾಕಿದರು.

ಕಳೆದ ಚುನಾವಣೆಯಲ್ಲಿ ಹರತಾಳು ಹಾಲಪ್ಪನವರನ್ನು ಸೋಲಿಸಿ ಸಾಗರ ಅಭಿವೃದ್ಧಿಯಲ್ಲಿ  ಹತ್ತು ವರ್ಷ ಹಿಂದೆ ಹೋಗಿದೆ. ಕೇವಲ ಮಾತನಾಡಿಸಿಲ್ಲ, ಹೆಗಲ ಮೇಲೆ ಕೈ ಹಾಕಿಲ್ಲ ಎಂದು ಅವರನ್ನು ಸೋಲಿಸಿರುವುದು ನಮಗೆ ನಷ್ಟವೇ ಹೊರತು ಅವರಿಗಲ್ಲ ಎಂದು ಹೇಳಿದರು.

ಸಾಗರ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹಾರೆಕೊಪ್ಪ, ಆನಂದಪುರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಾಂತಪ್ಪ ಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ ಹೊನಗೋಡು, ಪ್ರಮುಖರಾದ ಭರ್ಮಪ್ಪ, ಗುರುರಾಜ್, ರೂಪ ಅಶೋಕ್, ಕೊಟ್ರಪ್ಪ ಇದ್ದರು.

Join WhatsApp

Join Now

Join Telegram

Join Now

Leave a Comment