ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಶಿವಮೊಗ್ಗ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾನವೀಯ ಘಟನೆ

On: June 30, 2025 6:06 AM
Follow Us:
---Advertisement---

ಸಾಗರ : ತಾಲ್ಲೂಕಿನ ಸಮೀಪದ ಗೌತಮಪುರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾನವೀಯ ಘಟನೆ ನಡೆದಿದೆ.

ಏನಿದು ಘಟನೆ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ಕಸ ಹಾಕಿದ್ದಾರೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ವಯಸ್ಸಾದ ಮಹಿಳೆಯನ್ನು ಎಳೆದು ಕೊಂಡು ಹೋಗಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಹಲ್ಲೆ ಮಾಡಿದ ವ್ಯಕ್ತಿಗಳು, ಹಲ್ಲೆಗೆ ಒಳಗಾದವರ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದು, ಕಸವನ್ನು ವಯಸ್ಸಾದ  ಮಹಿಳೆಯ (ಹುಚ್ಚಮ್ಮ, 67 ವಯಸ್ಸು)  ಮನೆಯ ಜಾಗಕ್ಕೆ ಕಸವನ್ನು ಹಾಕಿದ್ದಾರೆ. ಕಸವನ್ನು ಯಾಕೆ ಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ ವೃದ್ದೆಯ ಮಗ ಕನ್ನಪ್ಪ 

ಅನಿವಾರ್ಯ ಕಾರಣದಿಂದ ದೂರದ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಹಾಗಾಗಿ ಮನೆಯಲ್ಲಿ ವಯಸ್ಸಾದ ತಂದೆ ತಾಯಿಗಳು ಮನೆಯಲ್ಲಿ ಇರುತ್ತಾರೆ. ಆ ಕಾರಣದಿಂದ ಘಟನೆ ಮರುಕಳಿಸದಂತೆ ಮನೆಯವರಿಗೆ ರಕ್ಷಣಾ ಇಲಾಖೆಯವರು ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಮೂವರು ವಿರುದ್ಧ ಪ್ರಕರಣ ದಾಖಲು

ಕಂಬಕ್ಕೆ ಕಟ್ಟಿ ಹೊಡೆದ ವಿಚಾರವಾಗಿ  ಪ್ರೇಮ, ಮಂಜುನಾಥ್, ದರ್ಶನ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment