ಸಾಗರ
ಸಾಗರ ಹಾಗೂ ಶಿಕಾರಿಪುರ ತಾಲ್ಲೂಕಿನ ಗಡಿ ಭಾಗದಲ್ಲಿರುವ ಅಂಬ್ಲಿಗೊಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು. ಮೀನು ಹಿಡಿಯೋ ಸಂಭ್ರಮದಲ್ಲಿ ಗ್ರಾಮಸ್ಥರು ಇರುವುದು ಕಂಡುಬಂದಿತು.
ಎರಡು ತಾಲ್ಲೂಕುಗಳ ಗಡಿ ಭಾಗದಲ್ಲಿರುವ ಅಂಬ್ಲಿಗೊಳ ಜಲಾಶಯ 70.79 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.
ಎರಡು ತಾಲ್ಲೂಕುಗಳ ಜೀವ ನಾಡಿಯದ ಅಂಬ್ಲಿಗೊಳ ಜಲಾಶಯ
ಈ ಜಲಾಶಯದಿಂದ ಸಾಗರ ಹಾಗೂ ಶಿಕಾರಿಪುರ ತಾಲ್ಲೂಕಿನ ಜೀವ ನಾಡಿಯಾಗಿದೆ. ಶಿಕಾರಿಪುರ ತಾಲ್ಲೂಕಿನ ಸುಮಾರು 3200 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿದ್ದು, ನಾಟಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ಸಾಗರ ತಾಲ್ಲೂಕಿನ 8 ಗ್ರಾಮ ಪಂಚಾಯಿತಿ 100 ಕ್ಕೂ ಹೆಚ್ಚು ಗ್ರಾಮಗಳಿಗೆ ಜೆಜೆಎಂ ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ.
ಮೀನು ಬೇಟೆಗೆ ಮುಂದಾದ ಗ್ರಾಮಸ್ಥರು
ಅಂಬ್ಲಿಗೊಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಹರಿದು ಬರುತ್ತಿದ್ದ ನೀರಿನಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರು ಬಲೆಗಳ ಮೂಲಕ ಮೀನು ಹಿಡಿಯುತ್ತಿದ್ದ ಸಾಹಸಮಯ ಹಾಗೂ ಸಂಭ್ರಮದ ದೃಶ್ಯ ಕಂಡುಬಂದಿತು.